Description
ವಿವರಣೆ
विवरण
A massive structure that is in front of you is known as the Nagaar Khana Come let us explore, The structure has a basement and first floor, located about 400 feet from the world-famous Gol Gumbaz. It is stated that the building was constructed as a resting place for the king while visiting the construction site. The Nagar Khan building is not complete. The upper part of the building is still unfinished today.
In the 19th century, the British turned it into a museum to Preserve Unique items. while installing Doors and Windows British government took extra care and copied the beautiful design of Asara Mahal which is Another famous building in Vijayapur . Beautiful Sun Shaped windows can be observed.
In 1912 AD, the museum was handed over to the District Collector. After independence in 1962, it was handed over to Archeology Survey of India. The museum exhibits rare items found in and around Vijayapur.
The museum has beautiful calligraphy inscriptions in Arabic, Persian, Kannada and Sanskrit. And From the 6th to the 18th century, Brahmanical and Jain sculptures, heroic stones, numerous manuscripts, coins, carpets, maps, paintings, street ware and some rare items can be found.
Let’s get in the museum and experience the beauty of it, you get the entry passes at ticket counter located left side of the building. Keep enjoying as we move to the next part of the fort.
ಈಗ ನಿಮ್ಮ ಮುಂದೆ ಕಾಣುತ್ತಿರುವ ಕಟ್ಟಡವೇ ನಾಗಾರಖಾನ. ಒಂದು ನೆಲಮಾಳಿಗೆ ಹೊಂದಿರುವ ಈ ಕಟ್ಟಡವು ನೆಲ ಅಂತಸ್ತು ಸೇರಿ ಒಂದು ಮಹಡಿಯನ್ನು ಹೊಂದಿದೆ. ವಿಶ್ವವಿಖ್ಯಾತ ಗೋಳಗುಮ್ಮಟ ಅಲ್ಲಿಂದ ದಕ್ಷಿಣಕ್ಕೆ ಸುಮಾರು 400 ಅಡಿ ಅಂತರದಲ್ಲಿ ಇದೆ. ಗೋಳಗುಮ್ಮಟ ಕಟ್ಟುವಾಗ ಉಸ್ತುವಾರಿಯಾಗಿ ಬರುತ್ತಿದ್ದ ಅರಸನ ವಿಶ್ರಾಂತಿಗಾಗಿ ಈ ಕಟ್ಟಡವನ್ನು ಕಟ್ಟಲಾಯಿತು ಎಂದು ಹೇಳುತ್ತಾರೆ. ನಗಾರ್ ಖಾನ ಕಟ್ಟಡವು ಸಂಪೂರ್ಣವಾದಂತಿಲ್ಲ. ಕಟ್ಟಡದ ಮೇಲ್ಭಾಗ ಇಂದಿಗೂ ಅಪೂರ್ಣವಾಗಿದೆ.
19ನೇ ಶತಮಾನದಲ್ಲಿ ಬ್ರಿಟಿಷರು ಇದನ್ನು ಅಪರೂಪದ ವಸ್ತುಗಳನ್ನು ಸಂಗ್ರಹಿಸಿಡಲು ವಸ್ತು-ಸಂಗ್ರಹಾಲಯವನ್ನಾಗಿ ಬದಲಾಯಿಸಿದರು.ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸುವ ಸಮಯದಲ್ಲಿ ಮಹಡಿಯಲ್ಲಿದ್ದ ಬೃಹತ್ ಗಾತ್ರದ ಕಿಟಕಿಗಳಿಗೆ ಬಾಗಿಲುಗಳನ್ನು ಅಳವಡಿಸಬೇಕಾಗಿ ಬಂದಾಗಲೂ ಬ್ರಿಟಿಷರು ಏನು ಮಾಡಿ ಕೈತೊಳೆದುಕೊಳ್ಳಲಿಲ್ಲ. ವಿಜಯಪುರದಲ್ಲಿದ್ದ ಇನ್ನೊಂದು ಪ್ರಸಿದ್ಧ ಕಟ್ಟಡ ಆಸಾರ ಮಹಲ್ ಕಿಟಕಿಗಳ ಸುಂದರ ವಿನ್ಯಾಸವನ್ನು ಇದಕ್ಕಾಗಿ ನಕಲು ಮಾಡಲಾಯಿತು. ಸೂರ್ಯನ ವಿನ್ಯಾಸದ ಕಿಟಕಿಗಳನ್ನು ತಾವು ಗಮನಿಸಬಹುದು.
ಕ್ರಿ.ಷ 1912ರಲ್ಲಿ ಈ ವಸ್ತು-ಸಂಗ್ರಹಾಲಯವನ್ನು ಜಿಲಾಧಿಕಾರಿಗಳ ಆಧೀನಕ್ಕೆ ನೀಡಲಾಯಿತು. ಸ್ವಾತಂತ್ರದ ನಂತರ ಕ್ರಿ.ಷ 1962ರಲ್ಲಿ ಇದನ್ನು ಭಾರತೀಯ ಪುರಾತತ್ವ ಇಲ್ಲಾಖೆಯ ಆಧೀನಕ್ಕೆ ನೀಡಲಾಯಿತು. ಈ ಸಂಗ್ರಹಾಲಯದಲ್ಲಿ ವಿಜಯಪುರದ ಸುತ್ತಮುತ್ತ ದೊರಕಿದ ಅಮೂಲ್ಯ ಮತ್ತು ಅಪರೂಪದ ವಸ್ತುಗಳನ್ನು ಪ್ರದರ್ಶಿಸಲಾಗಿದೆ.
ಈ ವಸ್ತುಸಂಗ್ರಹಾಲಯದಲ್ಲಿ ಸುಂದರವಾದ ಕ್ಯಾಲಿಗ್ರಫಿಯಲ್ಲಿ ಬರೆದ ಅರೇಬಿಕ್, ಪರ್ಷಿಯನ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಶಿಲಾ ಶಾಸನಗಳನ್ನು, 6ನೇ ಶತಮಾನದಿಂದ 18ನೇ ಶತಮಾನದವರೆಗಿನ ಬ್ರಾಹ್ಮಣ ಮತ್ತು ಜೈನ ಶಿಲ್ಪಗಳು, ವೀರ ಕಲ್ಲುಗಳು, ಹಲವಾರು ಹಸ್ತಪ್ರತಿಗಳು, ನಾಣ್ಯಗಳು, ರತ್ನಗಂಬಳಿಗಳು, ನಕ್ಷೆಗಳು, ವರ್ಣಚಿತ್ರಗಳು,ಬೀದಿರಿ ಸಾಮಾನು ಹಾಗೂ ಕೆಲವು ಅಪರೂಪದ ವಸ್ತುಗಳನ್ನು ಕಾಣಬಹುದು.
ವಸ್ತು-ಸಂಗ್ರಹಾಲಯ ಪ್ರವೇಶ ದ್ವಾರದ ಬಳಿ ತೋಪುಗಳನ್ನು ಇರಿಸಲಾಗಿದೆ. ಇನ್ನು ನೀವು ವಸ್ತು-ಸಂಗ್ರಹಾಲಯ ಪ್ರವೇಶಿಸಿ ಅದರ ಸೌಂದರ್ಯವನ್ನು ಸವಿದು ಬನ್ನಿ. ಕಟ್ಟಡದ ಎಡಭಾಗದಲ್ಲಿರುವ ಟಿಕೆಟ್ ಕೌಂಟರ್ನಲ್ಲಿ ನೀವು ಪ್ರವೇಶ ಪಾಸ್ಗಳನ್ನು ಪಡೆಯಬಹುದು.
विशाल संरचना जो आपके सामने है उसको नागारखाना के नाम से संबोधित किया जाता है। इस संरचना में एक तहखाना और पहली मंजिल मौजूद है, यह स्मारक विश्व प्रसिद्ध गोल गुम्बज से लगभग 400 फीट की दूरी पर स्थित है। यह कहा जाता है कि भवन का निर्माण के समय पे राजा के विश्राम स्थल के रूप में इसका निर्माण किया गया था। नगर खान भवन पूर्ण नहीं है। इमारत का ऊपरी हिस्सा आज भी अधूरा है।
19 वीं शताब्दी में, अंग्रेजों ने इसे अनोखी वस्तुओं के संरक्षण के लिए एक संग्रहालय में बदल दिया। दरवाजे और विंडोज स्थापित करने के दौरान ब्रिटिश सरकार ने अतिरिक्त देखभाल की और आसरा महल के सुंदर विन्यासा की नकल की जो विजयपुर में एक और प्रसिद्ध इमारत है। उस सुंदर सूर्य के आकार की खिड़कियों को आज भी देखी जा सकती हैं।
सन 1912 में संग्रहालय को जिला कलेक्टर के आधीन मे दिया गया। स्वतंत्रता के बाद सन 1962 में, इसे भारतीय पुरातत्व सर्वेक्षण के आधीन मे दिया गया।
संग्रहालय में विजयपुर और विजयपुर के आसपास पाए गयी दुर्लभ वस्तुओं का प्रदर्शन किया गया है। संग्रहालय में अरबी, फारसी, कन्नड़ और संस्कृत में सुंदर शिलालेख हैं। और 6 से 18 वीं शताब्दी तक के, ब्राह्मण और जैन मूर्तियां, वीर स्तंभ, कई हस्तलिपि, सिक्के, कालीन, नक्शे, चित्र, बर्तन और कुछ दुर्लभ वस्तु गेख़ने के लिए मिल सकती हैं।
संग्रहालय में जाइए और इसकी सुंदरता का अनुभव करें, आपको भवन के बाईं ओर स्थित टिकट काउंटर पर प्रवेश पास मिलता है। किले के अगले हिस्से में मिलते हैं।

